ಜೇನುಕಡ್ಡಿ
	ಉತ್ತಮದರ್ಜೆಯ ಮೇವು ಕೊಡುವ ಒಂದು ಬಹುವಾರ್ಷಿಕ ಹುಲ್ಲು. ಪೋಯೇಸೀ (ಗ್ರಾಮಿನೀ) ಕುಟುಂಬಕ್ಕೆ ಸೇರಿದೆ. ತುರಿಕಡ್ಡಿ ಪರ್ಯಾಯ ನಾಮ. ಬಾತ್ರಿಯೋಕ್ಲೋವ ಇಂಟರ್‍ಮೀಡಿಯ ಇದರ ವೈe್ಞÁನಿಕ ನಾಮ. ಇದು ಆಫ್ರಿಕದ ಉಷ್ಣವಲಯ, ಪೂರ್ವ ಏಷ್ಯ, ಆಸ್ಟ್ರೇಲಿಯ, ಭಾರತಗಳಲ್ಲೆಲ್ಲ ಬೆಳೆಯುತ್ತದೆ. ಸುಮಾರು 2.5 m ಎತ್ತರಕ್ಕೆ ಬೆಳೆಯುವ ಉದ್ದನೆಯ ಹುಲ್ಲು ಇದು. ತುಂಡುಗಳಿಂದ ಇದನ್ನು ವೃದ್ದಿಸಬಹುದು. ಇದರ ಬೆಳವಣಿಗೆ ತೀವ್ರಗತಿಯದು. ತುಂಬ ಬಲಿಯದಿದ್ದಾಗ ದನಕರುಗಳು ಮೆಚ್ಚಿನಿಂದ ತಿನ್ನುತ್ತವೆ. ಇದನ್ನು ಹಸಿಹುಲ್ಲಾಗಿ ಇಲ್ಲವೆ ಒಣ ಹುಲ್ಲಾಗಿ ಬಳಸಬಹುದು. ಒಂದು ವರ್ಷಕ್ಕೆ ಎಕರೆಯೊಂದಕ್ಕೆ ಸುಮಾರು 2 ಟನ್ ಮೇವನ್ನು ಪಡೆಯಬಹುದು.
(ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ